ತಾವರಗೇರಾ ಪಟ್ಟಣಕ್ಕೆ ರೈಲು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಬಹುದಿನದ ಬೇಡಿಕೆಯಾಗಿದ್ದ ಗಂಗಾವತಿಯಿಂದ ಬಾಗಲಕೋಟೆಯವರೆಗೆ ರೈಲ್ವೆ ಮಾರ್ಗದ ಹಿನ್ನೆಲೆಯಲ್ಲಿ ಕನಕಗಿರಿ, ತಾವರಗೇರಾ, ಕುಷ್ಟಗಿ, ಇಲಕಲ್ಲ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆ ವರೆಗೆ ರೈಲ್ವೆ ಮಾರ್ಗ ವಿಸ್ತರಿಸುವ ಕುರಿತಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರೈಲು ಹೋರಾಟ ಸಮಿತಿ ಸಂಚಾಲಕರಾದ ಎಚ್ ಆರ್ ಶ್ರೀನಾಥ್ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಕೊಪ್ಪಳ ಲೋಕಸಭಾ ಸದಸದ್ಯರಾದ ಕರಡಿ ಸಂಗಣ್ಣ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ 157 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗದ ಸರ್ವೇ ಕಾರ್ಯಕ್ಕೆ ರೂಪಾಯಿ 78.50 ಲಕ್ಷ ರೂ ಮಂಜೂರು ಮಾಡಿದ್ದು ಕುಷ್ಟಗಿ ಸೇರಿದಂತೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸರ್ವೆ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಮಂಡಳಿ ಸದಸ್ಯರು ಇವರಿಗೆ ಎಮ್ ಪಿ ಕರಡಿ ಸಂಗಣ್ಣನವರು ಅಭಿನಂದನೆ ಸಲ್ಲಿಸಿದ್ದು, ಈ ಕುರಿತಂತೆ ಸ್ಥಳೀಯರು ಕೂಡ ಪಕ್ಷಾತೀತ ವಾಗಿ ಕೊಪ್ಪಳ, ಬಳ್ಳಾರಿ, ಬಾಗಲಕೋಟೆ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮೀಸಿದ ಎಲ್ಲಾ ಜನಪ್ರತಿನಿಧಿಗಳಿಗೆ ನಮ್ಮ ಉದಯ ವಾಹಿನಿ ಯಿಂದ ಅಭಿನಂದನೆಗಳು.

Share this Article
error: Content is protected !!