ತಾವರಗೇರಾ: ಚರಂಡಿಯಲ್ಲಿ ಗಂಡು ಭ್ರೂಣ ಪತ್ತೆ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಚರಂಡಿಯೊಂದರಲ್ಲಿ ಗಂಡು ಮಗುವಿನ ಭ್ರೂಣ ಪತ್ತೆಯಾಗಿದ್ದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.

ಬೆಳಿಗ್ಗೆಯಿಂದಲೇ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಸೇರಿದಂತೆ ಪೊಲೀಸರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಯವರು ಆಗಮಿಸಿ ನಂತರ ಭ್ರೂಣವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭ್ರೂಣ ಪತ್ತೆಯಾಗಿರುವುದರಿಂದ ಸಾರ್ವಜನಿಕರ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.

Share this Article
error: Content is protected !!