ತಾವರಗೇರಾ: ಬಕ್ರೀದ್ ಹಬ್ಬ ಆಚರಣೆ, ಸಿಹಿ ಹಂಚಿದ ಪಿಎಸ್ಐ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಲ್ಲಿಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸಲ್ಮಾನ ಬಂಧುಗಳೆಲ್ಲರೂ ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಠಾಣೆಯ ಪಿಎಸ್ಐ ವೈಶಾಲಿ ಝಳಕಿ ಹಾಗೂ ಸಿಬ್ಬಂದಿಯವರು ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದಿರುವುದು ಎಲ್ಲರ ಪ್ರಶಂಸೆ ಗೆ ಕಾರಣವಾಯಿತು. ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿದ್ದಕ್ಕಾಗಿ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಿದ ಪಿಎಸ್ಐ ವೈಶಾಲಿ ಝಳಕಿ ಹಾಗೂ ಸಿಬ್ಬಂದಿ ವರ್ಗ ಹಾಗೂ ಸಮಸ್ತ ಮುಸಲ್ಮಾನ ಬಾಂಧವರು ಉಪಸ್ಥಿತರಿದ್ದರು.

Share this Article
error: Content is protected !!