ತಾವರಗೇರಾ: ವಿದ್ಯಾರ್ಥಿ ಅಪಹರಣ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ 11 ನೇ ವಾರ್ಡಿನ ಪರಶುರಾಮ ಮಲ್ಲಪ್ಪ ಓಲಿ 10 ನೇ ತರಗತಿಯ ವಿದ್ಯಾರ್ಥಿಯ ಅಪಹರಣ ವಾಗಿದ್ದು, ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ದಿನಾಂಕ 25-05-2022 ರಂದು ಪರಶುರಾಮ ಎಂಬ ವಿದ್ಯಾರ್ಥಿಯು ಶಾಲೆ ಮುಗಿಸಿಕೊಂಡು ಅವರ ಅಜ್ಜನಾದ ದೊಡ್ಡಪ್ಪ ಬಳೂಟಗಿ ಅವರ ಮನೆಗೆ ಹೋಗಿದ್ದನು ನಂತರ ಅಜ್ಜನಿಗೆ ನಮ್ಮ ಮನೆಗೆ ಹೋಗುತ್ತೆನೆ ಎಂದು ಹೋಗಿರುತ್ತಾನೆ ಆದರೆ ಮನಗೆ ಬಾರದ ಕಾರಣ, ಅವರ ತಂದೆ ಮಲ್ಲಪ್ಪ ನು ರಾತ್ರಿ ಎಲ್ಲಾ ಹುಡುಕಾಡಿದ್ದು, ಮಗನ‌ಪತ್ತೆ ಆಗಿಲ್ಲದಿರುವದರಿಂದ ತಮ್ಮ ಸಂಬಂಧಿಕರ ಎಲ್ಲಾ ಊರುಗಳಿಗೂ ವಿಚಾರಿಸಲಾಗಿ, ಇದುವರೆಗೂ ಮಗನ ಪತ್ತೆ ಆಗಿರುವುದಿಲ್ಲ ಇದರಿಂದಾಗಿ ಅಪ್ರಾಪ್ತ ವಯಸ್ಸಿನ ನನ್ನ ಮಗನನ್ನು ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿರಬಹುದೆಂದು ಸಂಶಯ ವ್ಯಕ್ತ ಪಡಿಸಿ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿ ಮಗನನ್ನು ಪತ್ತೆ ಹಚ್ಚಿಕೊಡುವಂತೆ ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಯವರಲ್ಲಿ ದೂರು ನೀಡಿದ್ದಾರೆ. ಈ ಕುರಿತಂತೆ ತನಿಖೆ ಮುಂದುವರೆಸಿದ್ದಾರೆ.

Share this Article
error: Content is protected !!