ತಾವರಗೇರಾ: ಪಟ್ಟಣದ ವಿದ್ಯಾರ್ಥಿನಿ ಐಶ್ವರ್ಯ ನಾಗಲೀಕರ ರಾಜ್ಯಕ್ಕೆ ದ್ವಿತೀಯ ಸ್ಥಾನ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಲ್ಲಿ ಪಟ್ಟಣದ ವಿಶ್ವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ವಿರೇಶ ನಾಗಲೀಕರ ಒಟ್ಟು 625 ಅಂಕಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ Rank ಪಡೆದು ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿದ್ದು ಶಾಲೆಯ ಮುಖ್ಯಗುರು ಮಹಾಂತೇಶ ಬಂಡರಗಲ್ ಹಾಗೂ ಶಾಲಾಡಳಿತ ಮಂಡಳಿ ಹಾಗೂ ಪಟ್ಟಣದ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಯ ಸಾಧನೆಗೆ ಅಭಿನಂದಿಸಿದ್ದಾರೆ.

ಅದರಂತೆ ಪಟ್ಟಣದ ಎಸ್ ಎಮ್ ವಿ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಐಲಿ 623 ಅಂಕ ಪಡೆದಿದ್ದು, ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣಪ್ಪ ಶಿರವಾರ ಹಾಗೂ ಕಾರ್ಯದರ್ಶಿ ಚಂದ್ರಶೇಖರ ನಾಲತವಾಡ ಹಾಗೂ ಮುಖ್ಯ ಗುರುಗಳಾದ ಡಿ ಆರ್ ಪಾಟೀಲ್ ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದರಂತೆ ಪಟ್ಟಣದ ಎಸ್ ಎಸ್ ವಿ ಶಾಲೆಯ ವಿದ್ಯಾರ್ಥಿನಿ ಪೂಜಾ ಆಂಜನೇಯ 622 ಅಂಕ ಪಡೆದಿದ್ದು ಶಾಲೆಗೆ ಕೀರ್ತಿ ತಂದಿದ್ದಾಳೆ, ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶೇಖರಗೌಡ ಪೊಲೀಸ್ ಪಾಟೀಲ್, ಕಾರ್ಯದರ್ಶಿ ಮಲ್ಲನಗೌಡ ಓಲಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಗುರು ಪ್ರಭಾಕರ್ ಅವರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Share this Article
error: Content is protected !!