ತಾವರಗೇರಾ: ಗುಂಪು ಘರ್ಷಣೆ 26 ಜನರ ಮೇಲೆ ಪ್ರಕರಣ ದಾಖಲು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 26 ಜನರ ವಿರುದ್ದ ದೂರು ದಾಖಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದ್ದುನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆಯಾಗದಂತೆ ತಡೆಹಿಡಿದಿದ್ದಾರೇ ಆದರೂ ಕೂಡ ಒಂದು ಗುಂಪಿನ ಯುವಕರು 13 ಜನರ ವಿರುದ್ದ ದೂರು ದಾಖಲಿಸಿದ್ದರ ಪರಿಣಾಮದಿಂದಾಗಿ ಇನ್ನೊಂದು ಗುಂಪಿನ ಯುವಕರು ಕೂಡ ಅವರ 13 ಜನರ ವಿರುದ್ದ ಪ್ರತಿ ದೂರು ದಾಖಲಿಸಿದ್ದಾರೆ.
ಈ ಕುರಿತು ಎರಡು ಗುಂಪಿನ ಒಟ್ಟು 26 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!