ತಾವರಗೇರಾ: ಕಳೆದ 8 ತಿಂಗಳ ಹಿಂದೆ ತಾಯಿ ಮಗು ಕಾಣೆಯಾದ ಬಗ್ಗೆ ಪತ್ರಿಕಾ ಪ್ರಕಟಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಳೆದ 05-05-2021 ರಂದು ಸಮೀಪದ ನವಲಹಳ್ಳಿ ಗ್ರಾಮದ ಮಹಿಳೆ ಹಾಗೂ ಮಗು ಕಾಣೆಯಾಗಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸ್ಥಳೀಯ ಪೊಲೀಸರು ಇಲ್ಲಿಯವರೆಗೂ ಶ್ರಮಿಸಿದ್ದು ಆದಾಗ್ಯೂ ಸಹ ಪತ್ತೆಯಾಗಿರುವುದಿಲ್ಲ ಈ ಕುರಿತಂತೆ ಪತ್ತೆಯಾದಲ್ಲಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕೆಂದು ಸ್ಥಳೀಯ ಠಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ: ಕಳೆದ 8 ತಿಂಗಳ ಹಿಂದೆ ನವಲಹಳ್ಳಿ ಗ್ರಾಮದ ಶರಣಮ್ಮ ಶರಣಪ್ಪ ಚೌಡಿ (26) ವರ್ಷ ಹಾಗೂ ಮಗು ಮಹಾಂತೇಶ ಚೌಡಿ ಇವರು ನವಲಹಳ್ಳಿಯಿಂದ ತಾವರಗೇರಾ ಕ್ಕೆ ಹೋಗಿ ಬರುತ್ತೆನೆ ಎಂದು ಹೇಳಿ ಬಂದವರು ಇದುವರೆಗೂ ಪತ್ತೆಯಾಗಿಲ್ಲ ಇವರನ್ನು ಪತ್ತೆ ಮಾಡಿ ಕೊಡುವಂತೆ ಮಾವನಾದ ಶಿವನಂದಪ್ಪ ಕೌದಿ ಸ್ಥಳೀಯ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Share this Article
error: Content is protected !!