ತಾವರಗೇರಾ: ಈಜು ಕಲಿಯಲು ಹೋಗಿ ಬಾಲಕ ಸಾವು..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಬಾವಿಗೆ ಈಜು ಕಲಿಯಲು ಹೋದಾಗ ಈಜು ಬರದೇ ಬಾವಿಯಲ್ಲಿ ಮುಳುಗಿ ಬಾಲಕ ಮೃತ ಪಟ್ಟ ಘಟನೆ ಜರುಗಿದೆ.
ಮೃತ ಬಾಲಕನನ್ನು ಬಸವಣ್ಣ ಕ್ಯಾಂಪಿನ ಮಾರುತಿ ಶಾಮಣ್ಣ ಸತ್ಯಂ ಪೇಟ್ ಸುಡಗಾಡ ಸಿದ್ದರು (16) ಎಂದು ತಿಳಿದುಬಂದಿದೆ.
ಪಟ್ಟಣದ ಬಸವನಗೌಡ ಮಾಲಿ ಪಾಟೀಲ್ ಅವರ ಜಮೀನಿನಲ್ಲಿರುವ ಕೆಂಚನ ಬಾವಿಗೆ ಮಧ್ಯಾಹ್ನ ಈಜು ಕಲಿಯಲು ಹೋಗಿ ಸರಿಯಾಗಿ ಈಜು ಬರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೃತ ಬಾಲಕನ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!