ತಾವರಗೇರಾ: ಮತದನಾದಿಂದ ವಂಚಿತನಾದ ನೌಕರ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ವಾರ್ಡ್ ನಂ 9 ರ ಪಿಆರ್ ಓ ನಿರ್ಲಕ್ಷ ದಿಂದಾಗಿ ಮತದಾನರೊಬ್ಬರ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾದ ಘಟನೆ ಜರುಗಿತು.

ಮತದಾನ ಮಾಡಲು ಬಂದ ಖಾಜಾಹುಸೇನ ಎಂಬುವವರು ಮತದಾನ ಮಾಡಲು ಬಂದಾಗ ಅವರ ಹೆಸರಿನಲ್ಲಿ ಬೇರೊಬ್ಬರು ಮತದಾನ ಮಾಡಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕಿಡಾಗಿ, ನಾನು ಮತ ಚಲಾಯಿಸದೇ ಬೆರೊಬ್ಬರು ಮತಚಲಾಯಿಸಿರುದು ಇದು ಯಾವ ನ್ಯಾಯ ವೆಂದು ಮಾದ್ಯಮದವರ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು.

ಘಟನೆಗೆ ಸಂಬಂಧಿಸಿದಂತೆ ಮಾಧ್ಯಮದವರು ಪಿಆರ್ ಓ ಅವರನ್ನು ಸಂಪರ್ಕಿಸಲಾಗಿ ಬೇಜವಾಬ್ದಾರಿ ಹೇಳಿಕೆಯ ಜೊತೆಗೆ ಮಾದ್ಯಮದವರೊಂದಿಗೆ ವಾಗ್ವಾದ ಕ್ಕಿಳಿದರು. ನಂತರ ಈ ಕುರಿತು ತಹಶಿಲ್ದಾರರ ಗಮನಕ್ಕೆ ತರುತ್ತಿದ್ದಂತೆಯೇ ಅಧಿಕಾರಿಗಳು ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ , ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೊಂದಲ ನಿವಾರಣೆಗೆ ಮುಂದಾದರು, ಈ ಸಂದರ್ಭದಲ್ಲಿ ಸಿಪಿಐ ಎನ್ ಆರ್ ನಿಂಗಪ್ಪ, ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ, ತಿಪ್ಪೇಸ್ವಾಮಿ, ಶ್ರೀ ಶೈಲ ಸೋಮನಕಟ್ಟಿ ಉಪಸ್ಥಿತರಿದ್ದು ಮತದಾನ ವಂಚಿತ ರಾಗಿದ್ದ ಖಾಜಾ ಹುಸೇನ ಅವರಿಗೆ ಮರು ಮತದಾನಕ್ಕೆ ಅವಕಾಶ ನೀಡಿದರು.

Share this Article
error: Content is protected !!