ತಾವರಗೇರಾ: ಪಪಂ ಚುನಾವಣೆ ಪ್ರಥಮ ಹಂತದಲ್ಲಿ ಗೆಲುವಿನ ನಗೆ ಬೀರಿದ ಸೇವಾ ಸಮಿತಿ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಮಿತಿಯೊಂದನ್ನು ರಚಿಸಿ ಚುನಾವಣೆಗೆ ಸಿದ್ದರಾಗಿ, ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ಚುನಾವಣಾ ಕಣಕ್ಕಿಳಿದಿರುವ ನಾಗರಿಕ ಸೇವಾ ಸಮಿತಿಯು ಮೊದಲ ಹಂತದಲ್ಲಿಯೇ ಯಶಸ್ವಿಯಾಗಿ ಒಬ್ಬ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಗೊಳ್ಳಲು ವೇದಿಕೆ ಸಿದ್ದಪಡಿಸಿಕೊಂಡಿದೆ.

ಪಟ್ಟಣದ ವಾರ್ಡ್ ನಂ 2 ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಒಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದಾಗಿ ಪಟ್ಟಣ ಪಂಚಾಯತಿಯಲ್ಲಿ ಪ್ರಥಮ ಖಾತೆ ತೆರೆದು ಇತರ ಪಕ್ಷದ ಮುಖಂಡರುಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅದರಂತೆ ನಾಗರಿಕಾ ಸೇವಾ ಸಮಿತಿ ವತಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕರಡೆಪ್ಪ ಗುಂಡಪ್ಪ ನಾಲತವಾಡ ಒಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ್ದಾರೆ. ಇಂದೇ ನಾಮಪತ್ರ ಸಲ್ಲಿಸಲು ಕೊನೆಯದಿನ ವಾಗಿದ್ದರಿಂದಾಗಿ ಅವರ ಅವಿರೋಧ ಆಯ್ಕೆ ಖಚಿತ ವಾಗಿ ಸಮಿತಿ ಸದಸ್ಯರು ಬಣ್ಣ ಹಾಗೂ ಪಟಾಕಿಗಳನ್ನು ಹಚ್ಚಿ ಸಂಭ್ರಮದಲ್ಲಿರುವುದು ಕಂಡುಬಂತು.

Share this Article
error: Content is protected !!