ತಾವರಗೇರಾ: ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬಂಧಿಸಿದ ಪೊಲೀಸರು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಟ್ರ್ಯಾಕ್ಟರ್ ಟ್ರೈಲರ ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸ್ ರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿತರಿಂದ ಒಟ್ಟು 4 ಲಕ್ಷ 20 ಸಾವಿರ ಬೆಲೆ ಬಾಳುವ 3 ಟ್ರ್ಯಾಕ್ಟರ್ ಟ್ರೈಲರ್ ಗಳನ್ನು ವಶಪಡಿಸಿಕೊಂಡಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬಂಧಿತ ಆರೋಪಿಗಳನ್ನು ವಿರುಪಣ್ಣ ಬಸನಗೌಡ ಕಲಮಂಗಿ, ಮೆಹಬೂಬ್ ಸಾಬ ಹಸನಸಾಬ ಮೈಲಾಪುರ, ಯಮನೂರಪ್ಪ ರಾಮಣ್ಣ ಕೋಳಭಾಳ ಮೈಲಾಪುರ, ಸಿದ್ದಲಿಂಗ ನಾಗಪ್ಪ ಮೈಲಾಪುರ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಭೊಗೇಶ ದುರುಗಪ್ಪ ಸಂಕನಾಳ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ ಮತ್ತು ಕುಷ್ಟಗಿ ಸಿಂಧನೂರು, ಕನಕಗಿರಿ, ಕಾರಟಗಿ ತಾಲೂಕಗಳಲ್ಲಿ ಟ್ರ್ಯಾಕ್ಟರ್ ಟ್ರೈಲರ ಗಳನ್ನು ಕಳ್ಳತನ ಮಾಡುವರಾಗಿದ್ದಾರೆಂದು ಗಂಗಾವತಿ ಡಿವಾಯ್ಎಸ್ ಪಿ ಆರ್ ಎಸ್ ಉಜ್ಜನಕೊಪ್ಪ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ ಶ್ರೀಧರ್ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್, ತಾವರಗೇರಾ ಠಾಣೆ ಪಿಎಸ್ಐ ವೈಶಾಲಿ ಝಳಕಿ ಇವರ ನೇತೃತ್ವದಲ್ಲಿ ಎಎಸ್ಐ ಮಲ್ಲಪ್ಪ ವಜ್ರದ ಸಿಬ್ಬಂದಿಗಳಾದ ಮಹಾಂತೇಶ, ಗುಂಡಪ್ಪ, ಬಸವರಾಜ, ಆನಂದ, ಹನಮನಗೌಡ, ಮಂಜುನಾಥ, ಕರಿಯಪ್ಪ ತಂಡದಲ್ಲಿದ್ದು ಸದರಿ ಆರೋಪಿಗಳನ್ನು ಸಮೀಪದ ಕನ್ನಾಳ ಕ್ರಾಸ್ ಹತ್ತಿರ ಬಂಧಿಸಿದ್ದಾರೆ ಪ್ರಖರಣವನ್ನು ಅತೀ ಶೀಘ್ರದಲ್ಲೇ ಆರೋಪಿತರನ್ನು ಭೇದಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ ಗಳ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.

Share this Article
error: Content is protected !!