ಮೊರಾರ್ಜಿ ವಸತಿ ಶಾಲೆಗೆ ಶಾಸಕ ಬಯ್ಯಾಪೂರ ಭೇಟಿ, ಖಡಕ್ ಎಚ್ಚರಿಕೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ : ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥತೆಗೊಂಡಿದ್ದ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸುವ ಮೂಲಕ ಮಕ್ಕಳಲ್ಲಿದ್ದ ಆತಂಕ ದೂರಮಾಡಿದರು..!

ದಿನಾಂಕ 28-11-2021 ರಂದು ವಸತಿ ಶಾಲೆಯಲ್ಲಿ ವಿಷಯುಕ್ತ ಹಾಗೂ ಕಳಪೆ ಆಹಾರ ಸೇವಿಸುವ ಮೂಲಕ 30 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥತೆಗೊಂಡಿದ್ದರು. ಹಿನ್ನೆಲೆಯಲ್ಲಿ ಶಾಸಕ ಬಯ್ಯಾಪೂರು ಅವರು ವಸತಿ ಶಾಲೆಗೆ ಖುದ್ದು ಭೇಟಿ ನೀಡುವುದಲ್ಲದೆ, ಅಲ್ಲಿನ ಅವ್ಯವಸ್ಥೆಯ ಕುರಿತು ಸೂಚನೆ ನೀಡಿ, ಇನ್ನೊಮ್ಮೆ ಇಂತಹ ಅಹಿತಕರ ಘಟನೆ ಜರುಗದಂತೆ ತಾಕೀತು ಮಾಡಿದ್ದಲ್ಲದೆ, ಕಟ್ಟುನಿಟ್ಟಾಗಿ ಆಹಾರ ಪದ್ಧತಿ ನಿಯಮ ಪಾಲಿಸುವಂತೆ ಪ್ರಾಚಾರ್ಯರು ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಅಡುಗೆದಾರರಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದ ಪ್ರಸಂಗ ಜರುಗಿತು..!!

Share this Article
error: Content is protected !!