ಕಳ್ಳತನವಾಗಿದ್ದ 2 ಕೋಟಿ 26 ಲಕ್ಷ ರೂ ಮೌಲ್ಯದ ವಸ್ತುಗಳು ವಾರಸುದಾರರಿಗೆ ವಿತರಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2020-21 ರ ಅಕ್ಟೋಬರ್ ವರೆಗೆ ವರದಿಯಾಗಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಕಳ್ಳರಿಂದ ವಶಪಡಿಸಿಕೊಳ್ಳಲಾದ ಬಂಗಾರ ಮತ್ತು ಮೊಬೈಲ್ ಹಾಗೂ ಬೈಕುಗಳು ಸೇರಿದಂತೆ ಒಟ್ಟು 2 ಕೋಟಿ 26 ಲಕ್ಷ 22 ಸಾವಿರದ ಮೌಲ್ಯಗಳ ಸ್ವತ್ತನ್ನು ವಾರಸುದಾರರಿಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕಾರ್ಯಲಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ ಶ್ರೀಧರ್ ಅವರ ನೇತೃತ್ವದಲ್ಲಿ ನಡೆಯಿತು.

ತಾವರಗೇರಾ: ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ಕ್ಕೆ ಸಂಬಂಧಿಸಿದಂತೆ ಒಟ್ಟು 3 ಲಕ್ಷ 78 ಸಾವಿರ ರೂಗಳ ವಸ್ತುಗಳನ್ನು ವಾರಸುದಾರರಾದ ನಾರಿನಾಳ ಗ್ರಾಮದ ನಿಂಗಪ್ಪ ಮೆಂಟಗೇರಿ, ತಾವರಗೇರಾ ಪಟ್ಟಣದ ವಿರೇಶ ಅರಳಹಳ್ಳಿ, ಸಂಗನಾಳ ಗ್ರಾಮದ ವಿನಾಯಕ ಹಂಚಿನಾಳ ಎಂಬುವವರಿಗೆ ಒಪ್ಪಿಸಲಾಯಿತು.
ಈ ಸಂದರ್ಭದಲ್ಲಿ ಡಿವಾಯ್ ಎಸ್ ಪಿ ಆರ್ ಎಸ್ ಉಜ್ಜನಕೊಪ್ಪ, ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ, ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಸೇರಿದಂತೆ ವಿವಿಧ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ಕರಿಯಪ್ಪ ಸೇರಿದಂತೆ ಇನ್ನೀತರರಿದ್ದರು.

Share this Article
error: Content is protected !!