ತಾವರಗೇರಾ: ಇಸ್ಪಿಟ್ ಜೂಜಾಟ್, 20 ಜನರ ಬಂಧನ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಠಾಣಾ ವ್ಯಾಪ್ತಿಯ ಹೋಬಳಿಯ ವಿವಿಧ ಕಡೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮೀಪದ ಉಮಳಿ ರಾಂಪುರ, ಜುಮಲಾಪೂರ ಹಾಗೂ ಜೆ ರಾಂಪೂರ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಿ, ಬಂಧಿತರಿಂದ ರೂ 12450 ಹಾಗೂ ಜೂಜಾಟಕ್ಕೆ ಬಳಸಿಕೊಂಡಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಠಾಣಾಧಿಕಾರಿ ವೈಶಾಲಿ ಝಳಕಿ ನೇತೃತ್ವದ ತಂಡದಲ್ಲಿ ಎಎಸ್ಐ ಮಲ್ಲಪ್ಪ ವಜ್ರದ, ಸಿಬ್ಬಂದಿಗಳಾದ ಗುಂಡಪ್ಪ, ಬಸವರಾಜ ಇಂಗಳದಾಳ, ಶಂಕರ ಹೆಬ್ಬಲಿ, ಹನುಮನಗೌಡ , ಮಹಾಂತೇಶ, ಆನಂದ, ಕರಿಯಪ್ಪ ಇದ್ದರು.

Share this Article
error: Content is protected !!