ತಾವರಗೇರಾ: ಈದ್ ಮಿಲಾದ್ ಆಚರಣೆ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ (ಈದ್ ಮಿಲಾದ್ ) ನಿಮಿತ್ಯ ಪಟ್ಟಣದ ಸರ್ವ ಮುಸ್ಲಿಂ ಬಾಂಧವರು ಇಲ್ಲಿಯ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು.
ನಂತರ ಮೆಕ್ಕಾ, ಮದೀನಾ ಸ್ತಬ್ಧ ಚಿತ್ರದ ಮೆರವಣಿಗೆಯ ಮೂಲಕ ಶಾಮೀದ್ ಅಲಿ ದರ್ಗಾ, ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಖಾಜಾ ಬಂದೇನವಾಜ ದರ್ಗಾ ಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು.


ನಂತರ ಮಸೀದಿಯಲ್ಲಿ ಏರ್ಪಡಿಸಲಾಗಿದ್ದ ಉಪಹಾರ ದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಹಾಗೂ ಹಿರಿಯರು ಸೇರಿದಂತೆ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

Share this Article
error: Content is protected !!