ತಾವರಗೇರಾ: ನೂತನ ಪಿಎಸ್ಐ ವೈಶಾಲಿ ಝಳಕಿ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಠಾಣಾಧಿಕಾರಿ ಇಲ್ಲದಿದ್ದರಿಂದ ಎಎಸ್ಐ ಮಲ್ಲಪ್ಪ ವಜ್ರದ ಪ್ರಭಾರ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು ಈಗ ನೂತನ ಸ್ಥಳೀಯ ಠಾಣಾಧಿಕಾರಿಯನ್ನಾಗಿ ವೈಶಾಲಿ ಝಳಕಿ ಇವರನ್ನು ಬಳ್ಳಾರಿ ವಲಯದ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕರಾದ ಮನೀಷ್ ಖರ್ಬಿಕರ್ ಅವರು ವರ್ಗಾವಣೆ ಗೊಳಿಸಿ ಆದೇಶಿಸಿದ್ದಾರೆ.


ವೈಶಾಲಿ ಝಳಕಿ ಅವರು ಈ ಹಿಂದೆ ಬಳ್ಳಾರಿ ಜಿಲ್ಲೆಯ ಎಚ್ ಬಿ ಹಳ್ಳಿ ಹಾಗೂ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಸ್ಥಳೀಯ ಪಿಎಸ್ಐ ಆಗಿ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಲಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Share this Article
error: Content is protected !!