ತಾವರಗೇರಾ: ಹಿಟ್ ಮ್ಯಾನ್ ತಂಡಕ್ಕೆ ಒಲಿದ ಕ್ರಿಕೇಟ್ ಟ್ರೋಫಿ..!

N Shameed
1 Min Read

Audio Player

ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಗುಡ್ ಮಾರ್ನಿಂಗ್ ಕ್ರಿಕೇಟ್ ಕ್ಲಬ್ ಆಶ್ರಯದಲ್ಲಿ ನಡೆದ 11 ನೇ ಆವೃತ್ತಿಯ ಟಿಪಿಎಲ್ ನ ಫೈನಲ್ ಪಂದ್ಯದಲ್ಲಿ ಹಿಟ್ ಮ್ಯಾನ್‌ ತಂಡವು ಜಯಗಳಿಸಿ ಪ್ರಥಮ ಬಹುಮಾನ ತನ್ನ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರೋಗ್ಯ ಮಿಲ್ಕ್ ತಂಡವು 62 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು, ನಂತರ ಬ್ಯಾಟ ಮಾಡಿದ ಹಿಟ್ ಮ್ಯಾನ್ ತಂಡವು 8 ಓವರ ಗಳಲ್ಲಿ 63 ರನ್ ಗಳಿಸುವ ಮೂಲಕ ಜಯಶಾಲಿಯಾಯಿತು.
ಆಲ್ ರೌಂಡರ್ ಆಗಿ ಮಂಜುನಾಥ ಸಂಗನಾಳ ಪಂದ್ಯ ಪುರುಷೋತ್ತಮ ಹಾಗೂ ಸರಣಿಯುದ್ದದ ಬೌಲಿಂಗ್ ವಿಭಾಗದಲ್ಲಿ ಅತೀ ಹೆಚ್ಚು 31 ವಿಕೆಟ್ ಕಬಳಿಸಿವ ಮೂಲಕ ತಾಹಿರ್ ಮುಲ್ಲಾ, ಬ್ಯಾಟಿಂಗ್ ವಿಭಾಗದಲ್ಲಿ ಮಲ್ಲು ಓಲಿ ಅತೀ ಹೆಚ್ಚು 357 ರನ್ ಗಳಿಸುವ ಮೂಲಕ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ವಾಲಿಬಾಲ್ ಅಸೊಶಿಯೇಶನ್ ಅಧ್ಯಕ್ಷ ಗವಿಸಿದ್ದಪ್ಪ ನಾಗಲಿಕರ್, ಸ್ಥಳೀಯ ಮುಖಂಡರಾದ ಚಂದ್ರಶೇಖರ್ ನಾಲತವಾಡ, ಮಂಜುನಾಥ ಜೂಲಕುಂಟಿ, ಶುಕುರ್ ಬನ್ನು, ಅರುಣ ನಾಲತವಾಡ, ಗೋಲ್ಡನ್ ಶಿವು, ಖಾದರ ಮುರ್ತುಜಾ, ಇಮ್ರಾನ್, ಆನಂದ, ಶಾಮಣ್ಣ, ನಾನಾ ಮೇಣೆಧಾಳ, ರವಿ ಹೂಗಾರ, ಶಾಮ ಹೂಗಾರ, ಚಂದ್ರ ಮೌಳಿ ಸೇರಿದಂತೆ ಇನ್ನಿತರರಿದ್ದರು.

Share this Article
error: Content is protected !!