ಶಿಕ್ಷಕರ ದಿನಾಚರಣೆಯಂದೇ, ಮರಣ ಹೊಂದಿದ ಶಿಕ್ಷಕ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಶಿಕ್ಷಕರ ದಿನಾಚರಣೆಯ ಸಂಭ್ರಮದಲ್ಲಿರುವ ಶಿಕ್ಷಕರಿಗೆ ದಿನಾಚರಣೆ ದಿನದಂದೇ ಶಿಕ್ಷಕರೊಬ್ಬರು ನಿಧನರಾಗಿರುವದು ದುಃಖ ಕ್ಕೆ ಕಾರಣವಾಗಿದೆ.
ಸಮೀಪದ ಸಾಸ್ವಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿವು ಸೂರ್ಯವಂಶಿ (54) ನಿಧನರಾದ ದುರ್ದೈವಿ ಶಿಕ್ಷಕರಾಗಿದ್ದಾರೆ. ಮೃತರಿಗೆ ಪತ್ನಿ ಸೇರಿದಂತೆ ಪುತ್ರ ಹಾಗೂ ಪುತ್ರಿಯರು ಇದ್ದಾರೆ. ಅಗಲಿದ ಶಿಕ್ಷಕರಿಗೆ ಕುಷ್ಟಗಿ ತಾಲೂಕಿನ ಸಮಸ್ತ ಶಿಕ್ಷಕ ಬಳಗವು ಅತೀವ ಸಂತಾಪ ವ್ಯಕ್ತಪಡಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ತಿಳಿಸಿದ್ದಾರೆ.

Share this Article
error: Content is protected !!