ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಕುಷ್ಟಗಿಯ ರಸ್ತೆಯ ಪುಂಡಗೌಡರ ಹೊಲದ ಹತ್ತಿರ ಮಾರ್ಗ ಮಧ್ಯದಲ್ಲ್ಲಿ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ  ಜರುಗಿದೆ.
ಮೃತ ಬೈಕ್ ಸವಾರನ್ನು ಕುಷ್ಟಗಿ ತೆಗ್ಗಿನ ಓಣಿಯ ನಿವಾಸಿ ಲಾಡಸಾಬ ನಧಾಫ್ (೨೫) ಎಂದು ಗುರುತಿಸಲಾಗಿದೆ. ಬೈಕ್ ಸವಾರನು ಕುಷ್ಟಗಿ ಯಿಂದ ತನ್ನ ಹೆಂಡತಿ ಹಾಗೂ ಇಬ್ಬರ ಮಕ್ಕಳೊಂದಿಗೆ ಹೆಂಡತಿಯ ತವರು ಮನೆ ಸಿಂಧನೂರ ತಾಲೂಕಿನ ಗಾಂಧಿ ನಗರಕ್ಕೆ ಹೋಗುತ್ತಿದ್ದನು ಎಂದು ತಿಳಿದು ಬಂದಿದ್ದು, ಹೋಗುವಾಗ ಬೈಕ್ ನ ಮುಂದಿನ ಗಾಲಿ ಬ್ಲಾಸ್ಟ್ ಆಗಿ ಸವಾರನನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಹಾಕಲಾಗಿದ್ದ ಬಾಂಡ್ ಕಲ್ಲಿಗೆ ಡಿಕ್ಕಿ ಹೊಡೆದು ಮೃತ ಪಟ್ಟಿದ್ದಾನೆ.
ಬೈಕ್ನ ಹಿಂಬದಿಯಲ್ಲಿದ್ದ ಇಬ್ಬರ ಮಕ್ಕಳಿಗೂ ಹಾಗೂ ಪತ್ನಿ ಗೆ ಸಣ್ಣ ಪುಟ್ಟ ಗಾಯಗಲಾಗಿವೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪ್ರಭಾರಿ ಪಿಎಸ್ ಐ ಮಲ್ಲಪ್ಪ ವಜ್ರದ ಹಾಗೂ ಸಿಬ್ಬಂದಿ ಭೇಟ್ಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!