ಮೊಬೈಲ್ ಟವರ್ ಗೆ ಬೆಂಕಿ ಸ್ಥಳಾಂತರಕ್ಕೆ ಒತ್ತಾಯ..!

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ದೊಡ್ಡಬಸವೇಶ್ವರ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಮೊಬೈಲ್ ಟವರ್ ನಿಂದ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟವಾಗಿ ಕಾಣಿಸಿಕೊಂಡ ಹೊಗೆ ಸಹಿತ ಬೆಂಕಿಯಿಂದ ಕೆಲ ಕಾಲ ಸುತ್ತಲಿನ ಸಾರ್ವಜನಿಕರು ಆತಂಕಕ್ಕೆ ಈಡಾದ ಘಟನೆ ನಡೆದಿದೆ.

ಸ್ಥಳದಲ್ಲಿನ ಮಾಹಿತಿ ಅರಿತ ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ದೊಡ್ಡಬಸವ ರಾಟಿ. ಅಗ್ನಿ ಶಾಮಕ ಠಾಣಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತ ವನ್ನು ತಪ್ಪಿಸಿದ್ದಾರೆ.
ಪದೆ ಪದೆ ಈ ತರಹದ ಘಟನಾವಳಿಗಳಿಂದ ಬೇಸತ್ತ ಸುತ್ತಲಿನ ಗ್ರಾಮಸ್ಥರು ಇದೇ ಸಂಧರ್ಬದಲ್ಲಿ ಮೊಬೈಲ್ ಟವರ್ ಅನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

Share this Article
error: Content is protected !!