“ಕಮಲ” ತೊರೆದು, “ತೆನೆ” “ಕೈ” ಹಿಡಿದ ಚಂದ್ರಶೇಖರ ನಾಲತವಾಡ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮುಖಂಡ ಚಂದ್ರಶೇಖರ ನಾಲತವಾಡ ಬಹುತೇಕ ಜೆಡಿಎಸ್ ಸೇರುವದು ಖಚಿತವಾಗಿದೆ. ಮೊದಲ ಹಂತವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿ, ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.


ಶ್ರಾವಣ ಮಾಸದ ಕೊನೆಯ ವಾರದಲ್ಲಿ ಬೆಂಗಳೂರಿನ ಸಿಟಿಡಲ್ ಹೋಟೆಲ್ ನಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಪಕ್ಷ ಸೇರ್ಪಡೆ ಕಾರ್ಯನಡೆಯಲಿದೆ ಎಂದು ಚಂದ್ರಶೇಖರ ನಾಲತವಾಡ ತಿಳಿಸಿದ್ದಾರೆ .
ಈ ಕುರಿತು ಎಚ್ ಡಿ ಕುಮಾರಸ್ವಾಮಿ ಅವರು ಕೊಪ್ಪಳ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಅವರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚಂದ್ರಶೇಖರ ನಾಲತವಾಡ ಪಕ್ಷ ಸೇರ್ಪಡೆಯಿಂದಾಗಿ ಅನೂಕುಲ ವಾಗುತ್ತದೆ ಎಂದು ತಿಳಿಸಿದ್ದಾರೆ

Share this Article
error: Content is protected !!