ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಮುಖಂಡ ಚಂದ್ರಶೇಖರ ನಾಲತವಾಡ..!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವದಾಗಿ ಬಿಜೆಪಿ ಮುಖಂಡ ಹಾಗೂ ತಾಲೂಕ ಪಂಚಮಸಾಲಿ ಸಮುದಾಯದ ಅಧ್ಯಕ್ಷ ಚಂದ್ರಶೇಖರ್ ನಾಲತವಾಡ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 10 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದ ತೃಪ್ತಿ ಇದ್ದು ನನ್ನ ಅಳಿಲು ಸೇವೆ ಸಲ್ಲಿಸಿದ್ದು, ಪಕ್ಷವೂ ಕೂಡ ನನಗೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡಿದೆ,

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಹಾಗೂ ಸಂಸದ ಸಂಗಣ್ಣ ಕರಡಿ ನನ್ನನ್ನು ರಾಜಕೀಯ ವಾಗಿ ಮತ್ತು ವೈಯಕ್ತಿಕ ವಾಗಿ ಬಹಳಷ್ಟು ಪ್ರೀತಿ ತೋರಿಸಿದ್ದಾರೆ ಆದರೆ ನಾನು ಪಕ್ಷ ಬಿಡಲು ಪ್ರಮುಖ ಕಾರಣ ಏನೆಂದರೆ ಪಂಚಮಸಾಲಿಯ ತಾಲೂಕ ಅಧ್ಯಕ್ಷನಾಗಿ ಬಿಜೆಪಿ ಸರ್ಕಾರ ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ನೀಡದಿರುವುದು ಹಾಗೂ ನಮ್ಮ ಸಮುದಾಯದ ಮುಖ್ಯಮಂತ್ರಿ ಹುದ್ದೆ ತಪ್ಪಿಸಿರುವುದು ನಮ್ಮ ಸಮುದಾಯಕ್ಕೆ ನೋವಾಗಿದ್ದು ನಾನು ನನ್ನ ಸಮುದಾಯಕ್ಕೆ ಬೆಂಬಲ ನೀಡಿ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಪಾಟೀಲ ಅವರಿಗೆ ಪ್ರಾಥಮಿಕ ಸದಸ್ಯ ನ ರಾಜೀನಾಮೆ ಸಲ್ಲಿಸಿದ್ದೆನೆ ಈದು ನನ್ನ ವೈಯಕ್ತಿಕ ನಿರ್ಧಾರವಾಗಿದ್ದು ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸುವದಿಲ್ಲ ನಾನು ಬಿಜೆಪಿಯಿಂದ ದೂರ ಹೋಗಿದ್ದೆನೆ ನನ್ನ ಮುಂದಿನ ನಡೆ ಜೆಡಿಎಸ್ ಪಕ್ಷದ ಕಡೆ.

Share this Article
error: Content is protected !!