ಹೆಂಡತಿಯನ್ನು ಕೊಂದು, ಸಜ್ಜೆ ಹೊಲದಲ್ಲಿ ಬಿಸಾಕಿದ ಪಾಪಿ ಗಂಡ…!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿ ಯನ್ನೆ ಕೊಲೆ ಮಾಡಿ ಅದನ್ನು ಮುಚ್ಚಿ ಹಾಕಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿ ಯನ್ನು ಯಲಬುರ್ಗಾ ತಾಲೂಕಿನ ಯಡ್ಡೊಣಿ ಗ್ರಾಮದ ಮಂಜುಳಾ ಕಟ್ಟಿಮನಿ (25) ಎಂದು ಗುರುತಿಸಲಾಗಿದೆ.
ಸ್ಥಳೀಯ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸೇವೆಯಲ್ಲಿದ್ದ ಮಂಜುಳಾ ಇವರು ಕೊಪ್ಪಳ ತಾಲೂಕ ಮುದ್ದಾಬಳ್ಳಿ ಮಂಜುನಾಥ ಕಟ್ಟಿಮನಿಯೊಂದಿಗೆ ವಿವಾಹ ವಾಗಿತ್ತು, ಮಂಜುನಾಥನು ಕೇನರಾ ಬ್ಯಾಂಕಿ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು ಇತನಿಗೆ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಗುರುವಾರ ರಾತ್ರಿ ಬೃಂದಾವನ ಹೋಟೆಲ್ ನಲ್ಲಿ ಇಬ್ಬರು ಜೊತೆಯಲ್ಲಿ ಊಟ ಮಾಡಿದ ಫೋಟೊವನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್ ನಲ್ಲಿ ಹಂಚಿ ಕೊಂಡಿದ್ದು, ಅದೇ ರಾತ್ರಿ ಇಬ್ಬರ ನಡುವೆ ಜಗಳ ನಡೆದು ಪತಿ ಮಂಜುನಾಥನು ಮೊಬೈಲ್ ಚಾರ್ಜರ್ ವೈರನಿಂದ ಪತ್ನಿಯ ಕುತ್ತಿಗೆಗೆ ಬಿಗಿದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ್ದಿದ್ದಾನೆ ನಂತರ ಪ್ರಕರಣ ಮುಚ್ಚಿಹಾಕಲು ಪತ್ನಿಯ ಮೃತ ದೇಹವನ್ನು ಕೊಪ್ಪಳ ರಸ್ತೆಯ ಕದಳಿ ನಗರದ ಸಜ್ಜೆ ಹೊಲದಲ್ಲಿ ಎಸೆದು ಪರಾರಿಯಾಗಿದ್ದಾನೆ, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ, ಘಟನೆ ಕುರಿತು ಕುಷ್ಟಗಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Share this Article
error: Content is protected !!