ತಾವರಗೇರಾ: ಅಕ್ರಮ ಮದ್ಯ ವಶ : ಪ್ರಕರಣ ದಾಖಲು..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವಿವಿಧ ಸ್ಥಳಗಳಿಗೆ ಪೊಲೀಸರು ದಾಳಿ ನಡೆಸಿ ಬೆಲೆ ಬಾಳುವ ಮದ್ಯ ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಯಾಪೂರ, ಬಸವಣ್ಣ ಕ್ಯಾಂಪ್ ಹಾಗೂ ಜುಮಲಾಪೂರ ಗ್ರಾಮದ ಎರಡು ಕಡೆಗಳಲ್ಲಿ ದಾಳಿ ಮಾಡಿದ ಪೊಲೀಸರು 4 ಜನರ ಮೇಲೆ ಪ್ರಕರಣ ದಾಖಲಿಸಿ 15 ಲೀಟರ್ ಮದ್ಯ, 8675 ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಠಾಣೆಯ ಪ್ರಭಾರ ಪಿಎಸ್ಐ ಮಲ್ಲಪ್ಪ ವಜ್ರದ, ಎಎಸ್ಐ ಬಸವರಾಜ ನಾಯಕವಾಡಿ, ಪೇದೆಗಳಾದ ಬಸವರಾಜ, ಗುಂಡಪ್ಪ, ಮಲ್ಲಿಕಾರ್ಜುನ ಪಾಟೀಲ್, ವಿರೇಶ , ಶರಣಪ್ಪ, ಹನುಮೇಶ, ಕರಿಯಪ್ಪ, ದಾಳಿಯ ನೇತೃತ್ವ ವಹಿಸಿಕೊಂಡಿದ್ದರು.
ಒಟ್ಟು ನಾಲ್ಕು ಕಡೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದೆ.

Share this Article
error: Content is protected !!