ತಾವರಗೇರಾ: 5 ತಿಂಗಳ ಹಿಂದೆ ನಾಪತ್ತೆಯಾಗಿದ್ದ “ಮಂಜ”, ಮರಳಿ ಮನೆಗೆ ಬಂದ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಅಂಗವಿಕಲ ನಾಗಿದ್ದ ಮಂಜುನಾಥ ಸಿದ್ದಾಪುರ 23 ವರ್ಷದ ಬುದ್ಧಿಮಾಂದ್ಯ ಯುವಕನು ಕಳೆದ ಫೆಬ್ರವರಿ 12 ರಂದು ಪಟ್ಟಣದಿಂದ ಕಾಣೆಯಾಗಿದ್ದು ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು 5 ತಿಂಗಳ ನಂತರ ಯುವಕನು ಬೆಳಗಾವಿಯಲ್ಲಿ ಪತ್ತೆಯಾಗಿ ಇಂದು ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರ ಆನಂದಕ್ಕೆ ಕಾರಣವಾಗಿದೆ.

ಕಳೆದು ಹೋದ ಯುವಕನ ಪತ್ತೆಗಾಗಿ ಕುಟುಂಬಸ್ಥರು ವಿವಿಧ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು ಕೂಡ ಪತ್ತೆಯಾಗದ ಮಂಜುನಾಥನ ಬಗ್ಗೆ ಆತಂಕ ಮನೆಮಾಡಿತ್ತು ಆದರೆ ಪತ್ತೆ ಹಚ್ಚುವ ಶತ ಪ್ರಯತ್ನ ನಡೆಸಿದ ಮಂಜುನಾಥ ನ ಮಾವ ಯಮನೂರಪ್ಪ ಬಿಳೇಗುಡ್ಡ ಇವರು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಅಳಿಯನನ್ನು ಪತ್ತೆಹಚ್ಚುವಲ್ಲಿ ಯಶಸ್ವಿ ಯಾಗಿದ್ದಾರೆ. ಮರಳಿ ಬಂದ ಮಂಜುನಾಥ ನ ಬಗ್ಗೆ ಕುಟುಂಬಸ್ಥರಲ್ಲಿ ಹರ್ಷ ಮೂಡುವ ಮೂಲಕ ಪಟ್ಟಣದ ಜನರಿಗೂ ಕೂಡ ಸಂತಸಕ್ಕೆ ಕಾರಣವಾಗಿದೆ.

Share this Article
error: Content is protected !!