ಕಟಾವಿಗೆ ಬಂದ ಬೆಳೆ, ಕಳ್ಳರಿಗೆ ಸಿಹಿ, ರೈತನ ಬಾಳಿಗೆ ಕಹಿ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಷ್ಟಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ರೈತನ ಮಹಾದಾಸೆಗೆ ಯಾರೋ ಕಿಡಿಗೇಡಿಗಳು ಮಾಡಿದ ಕಳ್ಳತನದಿಂದಾಗಿ ಕಟಾವು ಗೆ ಬಂದಿದ್ದ ಹಾಗಲಕಾಯಿ ಕಳ್ಳರ ಪಾಲಾದಂತಾಗಿದೆ.
ಸಮೀಪದ ಬಚನಾಳ ಗ್ರಾಮದ ಪಂಪಯ್ಯ ಎಂಬ ರೈತರಿಗೆ ಸೇರಿದ 6 ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ಬೆಳೆಯಲಾಗಿದ್ದ ಹಾಗಲಕಾಯಿ ಬೆಳೆಯು ಕಟಾವಿಗೆ ಬಂದು ರೈತನ ಪಾಲಿಗೆ ಅಧಿಕ ಲಾಭ ಕೊಟ್ಟು ರೈತನ ಬಾಳು ಸಿಹಿಯಾಗಬೇಕಾಗಿದ್ದ ಬೆಳೆಯು ಕಳ್ಳರ ಪಾಲಾಗಿ ರೈತನ ಬಾಳಿಗೆ ಕಹಿಯಾಗಿರುವುದು ದುರಾದೃಷ್ಟಕರ ವಾಗಿದೆ.

ಅಂದಾಜು 2 ಲಕ್ಷ ರೂ ನಷ್ಟ ವಾಗಿದೆ ಎಂದು ರೈತ ಪಂಪಯ್ಯ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಐ ಬಸವರಾಜ ನಾಯಕವಾಡಿ, ಕಂದಾಯ ಇಲಾಖೆಯ ಸೂರ್ಯಕಾಂತ ಮಸ್ಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

Share this Article
error: Content is protected !!