ತಾವರಗೇರಾ: ಸಂಸದ, ಶಾಸಕರಿಂದ ರಸ್ತೆ ಕಾಮಗಾರಿಗೆ ಚಾಲನೆ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ನಂದಾಪೂರ ಗ್ರಾಮದ ರಸ್ತೆ ಕಾಮಗಾರಿಗೆ ಸಂಸದ ಸಂಗಣ್ಷ ಕರಡಿ ಹಾಗೂ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಚಾಲನೆ ನೀಡಿದರು.
ನಂತರ ಸಂಸದ ಸಂಗಣ್ಣ ಕರಡಿ ಮಾತನಾಡಿ ಮಾಜಿ ಪ್ರಧಾನಿ ವಾಜಪೇಯಿ ಅವರ ದುರದೃಷ್ಟಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಎಲ್ಲರ ಮನೆಮಾತಾಗಿದ್ದರು.
ಈ ಯೋಜನೆಯಡಿಯಲ್ಲಿ ತಾವರಗೇರಾ ದಿಂದ ನಂದಾಪೂರ, ನವಲಹಳ್ಳಿ, ಜುಮಲಾಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಒಟ್ಟು 15 ಕಿಲೋಮೀಟರ್ ರಸ್ತೆಗೆ 1182.3 ಲಕ್ಷ ರೂ ವೆಚ್ಚದಲ್ಲಿ ಡಾಂಬರಿಕರಣ ಮಾಡಲಾಗುತ್ತಿದೆ ಎಂದರು.
ನಂತರ ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ ಗುತ್ತಿಗೆದಾರರು ಉತ್ತಮ ಕಾಮಗಾರಿ ಜೊತೆಗೆ ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಬೇಕೆಂದು ಹೇಳಿದರು.


ಈ ಸಂಧರ್ಬದಲ್ಲಿ ಉದ್ಯಮಿ ಬಸನಗೌಡ ಮಾಲಿ ಪಾಟೀಲ್, ವೀರಭದ್ರಪ್ಪ ನಾಲತವಾಡ, ನಾರಯಣಗೌಡ ಮೆದಿಕೇರಿ, ವಿಕ್ರಮ್ ರಾಯ್ಕರ್, ಅಮರೇಶ ಗಾಂಜಿ, ರುದ್ರಗೌಡ ಕುಲಕರ್ಣಿ, ಚಂದ್ರಶೇಖರ್ ನಾಲತವಾಡ, ಸಾಗರ ಭೇರಿ, ಮಂಜುನಾಥ ಜೂಲಕುಂಟಿ, ವೀರನಗೌಡ ಪಾಟೀಲ್, ಮರೇಗೌಡ ನಂದಾಪೂರ, ದುರುಗೇಶ ಇದ್ಲಾಪುರ, ಬಾಲಪ್ಪ ಹಗಲದಾಳ, ದೊಡ್ಡನಗೌಡ ಜುಮಲಾಪೂರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Share this Article
error: Content is protected !!