ತಾವರಗೇರಾ: ಅಕ್ರಮ ಮದ್ಯ ಮಾರಾಟ, ಮಹಿಳೆ ವಿರುದ್ದ ಪ್ರಕರಣ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದ ಮಹಿಳೆ ಮೇಲೆ ಪೊಲೀಸ್ ರು ದಾಳಿ ನಡೆಸಿ ಬಾಟಲ್ ಗಳನ್ನು ವಶಪಡಿಸಿಕೊಂಡ ಘಟನೆ ಸಮೀಪದ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕಿಲ್ಲಾರಹಟ್ಟಿಯ ಸಿಂಧನೂರು ರಸ್ತೆಯ ಪಾನಶಾಪ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ರು ದಾಳಿ ನಡೆಸಿದಾಗ ಮದ್ಯದ ಬಾಟಲಿಯ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾಳೆ.

ಒಟ್ಟು 28.50 ಲೀಟರ್ ಟೆಟ್ರಾ ಪ್ಯಾಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೌಲ್ಯ 10904 ರೂ ಎಂದು ತಿಳಿದುಬಂದಿದ್ದು, ಪರಾರಿಯಾದ ಮಹಿಳೆ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.

Share this Article
error: Content is protected !!