ತಾವರಗೇರಾ: ಪಿಎಸ್ಐ ಗೀತಾಂಜಲಿ ಶಿಂಧೆ, ಸಿರವಾರ ಠಾಣೆಗೆ ವರ್ಗಾವಣೆ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಅವರು ವರ್ಗಾವಣೆಗೊಂಡಿದ್ದಾರೆ.
ಈ ಕುರಿತು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರ ಇಲಾಖೆ ವತಿಯಿಂದ ವರ್ಗಾವಣೆಗೊಂಡ ಬಗ್ಗೆ ತಿಳಿದು ಬಂದಿದೆ.
ಕಳೆದ ವರ್ಷದಲ್ಲಿ ಇಲ್ಲಿಗೆ ಆಗಮಿಸಿದ್ದ ಗೀತಾಂಜಲಿ ಶಿಂಧೆ ಅವರು ಇಲ್ಲಿಯವರೆಗೆ ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ಉತ್ತಮ ಮಹಿಳಾ ಪಿಎಸ್ಐ ಎಂದು ಇಲಾಖೆಯ ಜೊತೆಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಳೆದ ಕರೊನಾ ಸಂಧರ್ಬದಲ್ಲಿ ಆಗಮಿಸಿದ್ದ ಶಿಂಧೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಚ್ಚರ ವಹಿಸಿದ್ದರು. ಇತ್ತೀಚೆಗೆ ಇವರ ಸೇವೆಯನ್ನು ಗಮನಿಸಿದ ಗೃಹ ಇಲಾಖೆ ಜೊತೆಗೆ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದನ್ನು ಸ್ಮರಿಸಬಹುದಾಗಿದೆ.
ಇಲ್ಲಿಂದ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡಿರುವ ಶಿಂಧೆ ಅವರು ಅಲ್ಲಿಯು ಕೂಡ ತಮ್ಮ ಕಾರ್ಯವೈಖರಿ ಮೂಲಕ ಮೆಚ್ಚುಗೆ ಗಳಿಸಬೇಕೆಂಬುದು ಉದಯವಾಹಿನಿಯ ಆಶಯವಾಗಿದೆ.

Share this Article
error: Content is protected !!