ತಾವರಗೇರಾ: ಪಟ್ಟಣದ ಬಾಲಕನಿಗೂ ಕರೊನಾ ದೃಡ, ಎಚ್ಚರದಿಂದಿರಲು ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಸಲಹೆ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಲ್ಲಿಯವರೆಗೆ ಒಟ್ಟು 110 ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ. ಅದರಲ್ಲೂ 11 ವರ್ಷದ ಬಾಲಕನಿಗೆ ಕರೊನಾ ದೃಡಪಟ್ಟಿರುವುದು ಪಟ್ಟಣದ ಜನರಲ್ಲಿ ಗಾಬರಿ ಹುಟ್ಟಿಸುವಂತಾಗಿದ್ದು ಸಾರ್ವಜನಿಕರು ಆದಷ್ಟೂ ಮನೆಯಲ್ಲಿದ್ದು ಸುರಕ್ಷತೆನ್ನು ಕಾಪಾಡಬೇಕೆಂದು ಪಟ್ಟಣ ಪಂಚಾಯತ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹೇಳಿದ್ದಾರೆ. ಹೋಬಳಿ ಯಾದ್ಯಂತ ಪಾಸಿಟಿವ್ ಸಂಖ್ಯೆ ಹೆಚ್ಚಿಗೆ ಬರುತ್ತಿರುವದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಇದ್ದು ಜಿಲ್ಲೆಯಾದ್ಯಂತ 5 ದಿನಗಳ ಕಠಿಣ ಲಾಕ್ ಡೌನ್ ಜಾರಿಗೊಳಿಸಿದ್ದನ್ನು ಕಡ್ಡಾಯವಾಗಿ ಪಾಲಿಸಿ ಕರೊನಾ ತಡೆಗಟ್ಟುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಈ ಸಂದರ್ಭದಲ್ಲಿ ಕರೊನಾ ವಾರಿಯಸ್೯ ಆಗಿ ಕೆಲಸಮಾಡುತ್ತಿರುವ ಪಪಂ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಉದಯವಾಹಿನಿಯ ಮೂಲಕ ಪಟ್ಟಣದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share this Article
error: Content is protected !!