ತಾವರಗೇರಾ: ಪಟ್ಟಣದ 4 ವರ್ಷದ ಬಾಲಕಿಯಿಂದ ಉಪವಾಸ ವ್ರತ..!

N Shameed
1 Min Read

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ 4 ವರ್ಷದ ಬಾಲಕಿಯೊಬ್ಬಳು ಪವಿತ್ರ ರಂಜಾನ್ ಹಬ್ಬದಲ್ಲಿ ಮುಸಲ್ಮಾನ ಬಂಧುಗಳು 1 ತಿಂಗಳುಗಳ ಕಾಲ ಆಚರಿಸಲಾಗುವ ಉಪವಾಸ ವ್ರತ (ರೋಜಾ) ದಲ್ಲಿ ಭಾಗವಹಿಸಿ ಒಂದು ದಿನ ರೋಜಾ ಆಚರಿಸಿ ಪಟ್ಟಣದ ಜನರ ಗಮನಸೆಳೆದದ್ದು ವಿಶೇಷವಾಗಿದೆ.
ಪಟ್ಟಣದ ಶಾಮೀದ್ ಅಲಿ ದರ್ಗಾದ ಮುತವಲಿ ಆಗಿದ್ದ ದಿವಂಗತ ವಲೀಸಾಬ್ ಮುಜಾವರ ಅವರ ಮೊಮ್ಮಗಳಾದ ಜೋಹಾ ಫಾತಿಮ ಎಂಬ ಬಾಲಕಿಯೇ ರೋಜಾ ಆಚರಿಸಿದ್ದ ಬಾಲಕಿಯನ್ನು ಪಟ್ಟಣದ ಮುಸ್ಲಿಂ ಧರ್ಮದ ಗುರುಗಳು ( ಮೌಲಾನಾ) ಹಫೀಜ್ ಜಾಹಿದ, ಹಫೀಜ್ ನಿಸಾರ್ ಬಿಸ್ತಿ ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಾಲಕಿಯ ತಂದೆ ಕಲೀಂ ಮುಜಾವರ, ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Share this Article
error: Content is protected !!