ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರ ಬಂಧನ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ (ಬೆಟ್ಟಿಂಗ್) ಜೂಜಾಟದಲ್ಲಿ ತೊಡಗಿದ್ದ ಮೂರು ಜನ ಯುವಕರು ಪೊಲೀಸ್ ವಶವಾಗಿದ್ದಾರೆ.
28.04.2021 ರಂದು ರಾತ್ರಿ ಸಮಯ 7.30 ಕ್ಕೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಐಪಿಎಲ್ ಜೂಜಾಟದಲ್ಲಿ ಭಾಗಿಯಾಗಿದ್ದ ಶಿವನಗೌಡ ಪುಂಡಗೌಡ್ರ, ಪ್ರೇಮ ರಜಪೂತ ಹಾಗೂ ರವಿಚಂದ್ರ ಬನ್ನಿಕಟ್ಟಿ ಬಂಧಿತರು. 100 ರೂಪಾಯಿಗಳಿಗೆ (ಡಬಲ್) 200 ರೂಪಾಯಿಗಳನ್ನು ನೀಡುತ್ತಿರುವುದು ತಿಳಿದುಬಂದಿದೆ. ಪ್ರಕರಣ (ಸಂಖ್ಯೆ 49/2021) ದಾಖಲಿಸಿಕೊಂಡ ಪಿಎಸ್ ಐ ಗೀತಾಂಜಲಿ ಶಿಂಧೇ ತನಿಖೆ ಕೈಗೊಂಡಿದ್ದಾರೆ. ಪಟ್ಟಣದಲ್ಲಿ ಐಪಿಎಲ್ ಬೆಟ್ಟಿಂಗ್ ದಂದೆ ಜೋರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ..!!

Share this Article
error: Content is protected !!