ಅಕ್ರಮ ಮದ್ಯ ಮಾರಾಟ, ಪೊಲೀಸರ ದಾಳಿ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ಸಾಸ್ವಿಹಾಳ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತಾವರಗೇರಾ ಪೊಲೀಸ್ ರು ದಾಳಿ ನಡೆಸಿ ಒಟ್ಟು 33724 ರೂಗಳ ಮದ್ಯ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಅಕ್ರನ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸ್ಥಳೀಯ ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿದಾಗ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯು ಸ್ಥಳದಲ್ಲಿಯೇ ಮದ್ಯದ ಬಾಟಲಿಗಳನ್ನು ಬಿಟ್ಟು ಪರಾರಿತಾಗಿದ್ದಾನೆ ನಂತರ ಸ್ಥಳೀಯರನ್ನು ವಿಚಾರಿಸಲಾಗಿ ಅಕ್ರಮ ಮದ್ಯ ಮಾರಾಟ ದಲ್ಲಿ ತೊಡಗಿದ್ದ ದೊಡ್ಡಪ್ಪ ಮುದಿಯಪ್ಪ ಉರಾಳ ಎಂದು ತಿಳಿದು ಬಂದಿದ್ದು ಆರೋಪಿಯು ತಲೆಮರೆಸಿಕೊಂಡಿದ್ದು ಸ್ಥಳದಲ್ಲಿದ್ದ 90 ಎಮ್ಎಲ್ ನ 480 ಐವಡ್ಸ್ ಟೆಟ್ರಾ ಪಾಕೀಟ್ ಹಾಗೂ 180 ಎಮ್ ಎಲ್ ನ 240 ಓರಿಜಿನಲ್ ಚಾಯ್ಸ್ ವಶಪಡಿಸಿಕೊಂಡಿದ್ದು ಆರೋಪಿ ಪರಾರಿಯಾಗಿದ್ದು ಪಿಎಸ್ಐ ಗೀತಾಂಜಲಿ ಶಿಂಧೆ, ಎಎಸ್ ಐ ಮಲ್ಲಪ್ಪ ಹಾಗೂ ಸಿಬ್ಬಂದಿ ವರ್ಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ತನಿಖೆ ಮುಂದು ವರೆಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಖರಣ ದಾಖಲಾಗಿದೆ.

Share this Article
error: Content is protected !!