ತಾವರಗೇರಾ: ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ..

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯು ಕೇವಲ ಆಚರಣೆಗೆ ಮಾತ್ರ ಸೀಮಿತ ಗೊಳ್ಳದೇ, ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಮುಕುಂದರಾವ ಭವಾನಿಮಠ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುದ್ದವನ ಉದ್ಘಾಟನೆ ನಂತರ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಗವಿಶಿದ್ದಪ್ಪ ಹಂದ್ರಾಳ್ ವಿಶೇಷ ಉಪನ್ಯಾಸ ನೀಡಿದರು. ಮುಖಂಡರಾದ ಶೇಖರಗೌಡ ಸರನಾಡಗೌಡರ್, ಆನಂದ ಭಂಡಾರಿ, ನಾದಿರಪಾಷಾ ಮುಲ್ಲಾ, ಪಿಎಸ್ಐ ಗೀತಾಂಜಲಿ ಶಿಂಧೆ, ಸುವರ್ಣಮ್ಮ ಕುಂಬಾರ, ಪಿ ರಮೇಶ್, ಸಾಗರ ಬೇರಿ, ರಾಜಾನಾಯಕ, ಅಮರೇಶ ಗಾಂಜಿ, ಸಂಜೀವ ಚಲುವಾದಿ, ಏಮರಾಜ ವಿರಾಪೂರ, ಜೀಲಾನಿಸಾಬ ಬಳೂಟಗಿ, ವಿರೇಶ ಪೂಜಾರಿ, ಪಂಪಾಪತಿ ಲಿಂಗದಹಳ್ಳಿ, ಶ್ಯಾಮೂರ್ತಿ ನಾರಿನಾಳ, ಲಕ್ಷ್ಮಣ ಮುಖಿಯಾಜಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಅಂಬೇಡ್ಕರ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಯುವಕರು ಬೈಕ್ ಮೂಲಕ ಮೆರವಣಿಗೆ ನಡೆಸಿದರು.

Share this Article
error: Content is protected !!