ತಾವರಗೇರಾ: ದೇವರ ದಾಸಿಮಯ್ಯ ಜಯಂತಿ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ ಪಟ್ಟಣದ ಸರ್ಕಾರಿ ಕಚೇರಿಗಳು ಶಾಲಾ,ಕಾಲೇಜುಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ದೇವರ ದಾಸಿಮಯ್ಯ ನವರ ಜಯಂತಿಯನ್ನು ಆಚರಿಸಲಾಯಿತು.              ಕರ್ನಾಟಕ ಪಬ್ಲಿಕ್ ಶಾಲೆ : ಇಲ್ಲಿಯ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಈರಪ್ಪ ಸೂಡಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಶಿಕ್ಷಕ, ಶಿಕ್ಷಕಯರು ಇದ್ದರು.

ನಾರಿನಾಳ : ಸಮೀಪದ ನಾರಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ವಾಧವರಾವ್ ದೇಸಾಯಿ ದೇವರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಶಿಕ್ಷಕರಾದ ನಾಗರಾಜ ಐಲಿ, ಮಾನಪ್ಪ ಕಮ್ಮಾರ, ಶಂಕರಗೌಡ ಸರನಾಡಗೌಡರ್, ಸಿತಾ, ಯಲ್ಲಪ್ಪ ಕಮತರ, ಮಹ್ಮದ್ ಯಾಸೀನ್,ಪುಷ್ಪಾ, ಸೇರಿದಂತೆ ಇನ್ನಿತರರಿದ್ದರು.

Share this Article
error: Content is protected !!