ಶಾಸಕರ ಮಗನೆಂದು ನಂಬಿಸಿ, ಯುವತಿಯನ್ನು ವಂಚಿಸಿದ ಯುವಕನ ಬಂಧನ…!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ: ಶಾಸಕರ ಪುತ್ರನೆಂದು ನಂಬಿಸಿ ಸಿಂಧನೂರು ಮೂಲದ ಯುವತಿಯನ್ನು ಅಪಹರಿಸಿ ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನನ್ನು ಕುಷ್ಟಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಆರೋಪಿಯು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬಾಗೋಡಿಯ ಮಹ್ಮದ ಚಾಂದ ಪಾಷಾ ಅಲಿಯಾಸ ಚಂದು ಪಾಟೀಲ್ ಎಂದು ಗುರುತಿಸಲಾಗಿದ್ದು, ಆರೋಪಿಯು ಶಾಸಕ ಅಭಯ ಪಾಟೀಲ್ ಅವರ ಮಗ ಚಂದು ಪಾಟೀಲ್ ಎಂದು ಹೇಳಿಕೊಂಡು ಯುವತಿಗೆ ಮದುವೆಯಾಗು ಎಂದು ಪೀಡಿಸಿ ಕಳೆದ ಮಾರ್ಚನಲ್ಲಿ ಗೋವಾ ರಾಜ್ಯದಲ್ಲಿ ಸುತ್ತಾಡಿದ್ದು, ಲೈಂಗಿಕವಾಗಿ ಬಳಸಿಕೊಂಡು ಫೋಟೊ ಹಾಗೂ ವಿಡಿಯೋ ಮಾಡಿಕೊಂಡಿದ್ದ ಯುವಕ ಯುವತಿಯ ಪಾಲಕರಿಗೆ ಕಳುಹಿಸಿ 9 ಲಕ್ಷರೂ ಹಣದ ಬೇಡಿಕೆಯಿಟ್ಟಿದ್ದ ಈ ಹಿನ್ನೆಲೆಯಲ್ಲಿ ಯುವತಿಯ ಪಾಲಕರು ಕಳೆದ ಫೆಬ್ರವರಿ 27 ರಂದು ತಾಲೂಕಿನ ತಾವರಗೇರಾ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕುಷ್ಟಗಿ ಸಿಪಿಐ ನಿಂಗಪ್ಪ ಆರ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ ವಂಚಿತಳಾದ ಯುವತಿಯು ತಾವರಗೇರಾ ಪಟ್ಟಣದ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಾವರಗೇರಾ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.

Share this Article
error: Content is protected !!