ಮಸ್ಕಿಯಲ್ಲಿ ಎಲೆಕ್ಷನ್..! ತಾವರಗೇರಾದಲ್ಲಿ ಕಲೆಕ್ಷನ್..!!

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ : ಮಸ್ಕಿ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಅದರ ಅಷ್ಟೆ , ತಾವರಗೇರಾ ಪಟ್ಟಣದಲ್ಲಿ ಎಲೆಕ್ಷನನ ಕಲೆಕ್ಷನ್ ಕೂಡಾ ಜೊರಾಗಿದೆ..!
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ತಾವರಗೇರಾ ಪಟ್ಟಣದಲ್ಲಿನ ವಸತಿ ಕೇಂದ್ರಗಳಲ್ಲಿ ಈಗಾಗಲೇ ಬೀಡುಬಿಟ್ಟಿದ್ದಾರೆ. ಪಟ್ಟಣಕ್ಕೆ ಕೆಲವೇ ಕೆಲವು ಕಿ.ಮೀ ದೂರದಲ್ಲಿರುವ ಮಸ್ಕಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಕೆಲ ನಾಯಕರು ತಾವರಗೇರಾ ಪಟ್ಟಣವನ್ನೇ ಕೇಂದ್ರವಾಗಿಸಿಕೊಂಡು ಮಸ್ತ ಮಜಾದಲ್ಲಿ ತೊಡಗಿಕೊಂಡಿದ್ದಾರೆ.
ಮಸ್ಕಿ ಉಪ ಚುನಾವಣೆಯ ಫಲಿತಾಂಶಕ್ಕೆ ತಾವರಗೇರಾ ಪಟ್ಟಣವು ದಿಕ್ಸೂಚಿಯೊಂದಿಗೆ ರಾಜಕಾರಣಿಗಳಿಗೆ ಶಕ್ತಿ ಕೇಂದ್ರದ ಜೊತೆಗೆ ಮಸ್ತ ಮಜಾ ಮಾಡಲು ಹೇಳಿ ಮಾಡಿಸಿದಂತ ತಾಣವಾಗಿರುವುದಂತು ಸತ್ಯ..!!

Share this Article
error: Content is protected !!