ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಥಳೀಯ ಕಾರ್ಯಕರ್ತರೊಬ್ಬರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡು ಕೇಕ್ ತಿನ್ನಿಸುವ ಮೂಲಕ ಸರಳತೆ ಮೆರೆದಿದ್ದು ವಿಶೇಷವಾಗಿತ್ತು. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಅಮರೇಶ ಗಾಂಜಿ ಅವರ ಹುಟ್ಟು ಹಬ್ಬದಂದು ಇಲ್ಲಿಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡರು.
Video Player
00:00
00:00
ಈ ಸಂದರ್ಭದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ದೆವೇಂದ್ರಪ್ಪ ಬಳೂಟಗಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸನಗೌಡ ಮಾಲಿ ಪಾಟೀಲ್,ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ, ಮುಖಂಡರಾದ ನಾರಾಯಣಗೌಡ ಮೆದಿಕೇರಿ, ಲಿಂಗರಾಜ ಹಂಚಿನಾಳ, ಬಸನಗೌಡ ರಾಂಪೂರ, ಶಾಮೀದ್ ದೋಟಿಹಾಳ, ಅಮರೇಶ ಕುಂಬಾರ, ಫಯಾಜ ಬನ್ನು, ರುದ್ರಗೌಡ ಕುಲಕರ್ಣಿ ಸೇರಿದಂತೆ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.