ತಾವರಗೇರಾ: ಏಪ್ರಿಲ್ 9 ಶುಕ್ರವಾರದಂದು ವಿದ್ಯುತ್ ಸ್ಥಗಿತ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ತಾಲೂಕಿನ ತಾವರಗೇರಾ ಸೇರಿದಂತೆ ದಿನಾಂಕ 09-04-2021 ರಂದು 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಕುಷ್ಟಗಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿಮಿತ್ಯ ಬೆಳಿಗ್ಗೆ 8:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವುದೆಂದು ಜೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ.
220 ಕೆವಿ ವಿದ್ಯುತ್ ಶಾಖೆಯ ವ್ಯಾಪ್ತಿಯಲ್ಲಿ ಬರುವ ದೋಟಿಹಾಳ, ಕೇಸೂರು, ಕ್ಯಾದಿಗುಪ್ಪ, ಶಿರಗುಂಪಿ, ಮುದೇನೂರ ಹಾಗೂ ತಾವರಗೇರಾ ಶಾಖೆಯ ವ್ಯಾಪ್ತಿಯಲ್ಲಿ ಬರುವ ತಾವರಗೇರಾ, ಗರ್ಜನಾಳ, ಹುಲಿಯಾಪುರ, ಮೇಣೆಧಾಳ, ಜುಮಲಾಪೂರ ಮತ್ತು ಇನ್ನಿತರ ಹಳ್ಳಿಗಳಲ್ಲಿ ಹಾಗೂ ಪಂಪಸೆಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

Share this Article
error: Content is protected !!