ತಾವರಗೇರಾ: ಗಂಡನಿಂದ ಹೆಂಡತಿ ‘ಕೊಲೆ’

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಗುರುವಾರದಂದು ನಡೆದಿದೆ. ಪಟ್ಟಣದ ಬಸವಣ್ಣ ಕ್ಯಾಂಪಿನ್ ಶಿಕ್ಷಕರ ಭವನದ ಸರ್ಕಾರಿ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು ಕೊಲೆಯಾದ ದುರ್ದೈವಿ ಗೀತಾ ಮಾಂತೇಷ ಗೌಳಿ (38) ನಿನ್ನೆ ರಾತ್ರಿಯಿಂದ ಜಗಳ ನಡೆದಿತ್ತೆನ್ನಲಾಗಿದೆ. ಜಗಳ ವಿಕೋಪಕ್ಕೆ ತೆರಳಿ ಗಂಡ ಮಾಂತೇಶ ಗೌಳಿ ಎಂಬಾತನು ಕಬ್ಬಿಣದ ರಾಡಿನಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮೃತಳಿಗೆ ಮೂವರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗನಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Share this Article
error: Content is protected !!