ತಾವರಗೇರಾಕ್ಕೂ ವಕ್ಕರಿಸಿದ ಕರೋನಾ ಮತ್ತೊಮ್ಮೆ ಆತಂಕದಲ್ಲಿ ಜನತೆ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ; ರಾಜ್ಯದಲ್ಲಿ ಬೆಚ್ಚಿ ಬೀಳಿಸಿರುವ ಕರೋನಾ ಅಬ್ಬರ ಈಗ ಪಟ್ಟಣಕ್ಕೂ ವಕ್ಕರಿಸಿದ್ದು ಸ್ಥಳೀಯ 59 ವರ್ಷದ ಮಹಿಳೆಯೊಬ್ಬರಿಗೆ ಮತ್ತು ಹೋಬಳಿಯ ಗರ್ಜಿನಾಳ ಗ್ರಾಮದ ಯುವಕ ಹಾಗೂ ಮುದೇನೂರಿನ ಪುರುಷ ಸೇರಿದಂತೆ ಒಟ್ಟು ಮೂರು ಜನರಿಗೆ ಕರೊನಾ ಸೋಂಕು ದೃಡಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ನೆಮ್ಮದಿಯಿಂದ ಇದ್ದ ಜನರಲ್ಲಿ ಈಗ ಆತಂಕ ಮನೆಮಾಡಿದ್ದು ಸಾರ್ವಜನಿಕರ ಚರ್ಚೆ ಗೆ ಗ್ರಾಸವಾಗಿದೆ ಈ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಮಾಸ್ಕ್ ಧರಿಸುವದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಮೂಲಗಳು ಹಾಗೂ ಉದಯವಾಹಿನಿ ವೆಬ್ ನ್ಯೂಸ್‌ ಮನವಿಮಾಡಿಕೊಂಡಿದೆ.

Share this Article
error: Content is protected !!