ತೋಟದ ಮನೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ ನಷ್ಟ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಸಮೀಪದ ಸಂಗನಾಳ ಗ್ರಾಮದ ರೈತ ಪ್ರಸಾದ್ ಸುಬ್ಬರಾವ್ ರವರ ತೋಟದ ಮನೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗಲಿರುವ ಘಟನೆ ಜರುಗಿದೆ.

ರೈತ ಪ್ರಸಾದ್ ಸುಬ್ಬರಾವ್ ರವರ ತೋಟದ ಮನೆಯಲ್ಲಿ ದಾಳೆಂಬೆ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಿಂಪಡಣೆ ಮಾಡಲು ಸಂಗ್ರಹಿಸಿದ್ದ ಬೆಲೆ ಬಾಳುವ ಕ್ರಿಮಿನಾಶಕದ ಡಬ್ಬಿಗಳು, ದವಸ, ಧಾನ್ಯಗಳು, ಕೃಷಿ ಪರಿಕರಗಳು ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಹಾಗೂ ಡ್ರಿಪ್ ಪೈಪುಗಳು, ಎಣ್ಣೆ, ಗೊಬ್ಬರ, ಅಕ್ಕಿ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟಿದ್ದು ಸುಮಾರು 3.50 ಲಕ್ಷ ರೂ ಬೆಲೆ ಬಾಳುವ ವಸ್ತುಗಳು ಹಾನಿಯಾಗಿರ ಬಹುದು ಎಂದು ಅಂದಾಜಿಸಲಾಗಿದೆ.

Share this Article
error: Content is protected !!