ಶುದ್ದ ಕುಡಿಯುವ ನೀರಿನ ಘಟಕದ ಶೆಡ್ ಗೆ ಬೆಂಕಿ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದ ಪೊಲೀಸ್ ಠಾಣೆ ಹತ್ತಿರ ಶುದ್ದ ಕುಡಿಯುವ ನೀರಿನ ಘಟಕ ದ ಶೆಡ್ ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟ ಘಟನೆ ಗುರುವಾರದಂದು ನಡೆದಿದೆ. ಇಲ್ಲಿಯ ಗ್ರಂಥಾಲಯದ ಮುಂದುಗಡೆ ಹೊಸದಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು ಆದರೆ ಯಾವುದೇ ಯಂತ್ರಗಳನ್ನು ಅಳವಡಿಸಿದ್ದಿಲ್ಲ ಘಟಕದ ಸುತ್ತಮುತ್ತಲಿನಲ್ಲಿ ಕಸಕಡ್ಡಿ ಹೆಚ್ಚಾಗಿದ್ದರಿಂದಾಗಿ, ಆಕಸ್ಮಿಕ ಬೆಂಕಿ ತಗುಲಿ ಘಟಕಕ್ಕೆ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದೆ.

ಅದೃಷ್ಟವಶಾತ್ ಸಮೀಪದಲ್ಲಿರುವ ಶಾಲೆ ಹಾಗೂ ಮನೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಕೆಲ ಯುವಕರು ಬೆಂಕಿ ನಂದಿಸುವಲ್ಲಿ ಸಫಲಾರಾಗಿದ್ದು ಹೆಚ್ಚಿನ ಅನಾಹುತ ವನ್ನು ತಪ್ಪಿಸಿದ್ದಾರೆ.

Share this Article
error: Content is protected !!