ತಾವರಗೇರಾದಲ್ಲಿ ಕಳ್ಳತನ:- ಮನೆಯವರು ‘ಜಾತ್ರೆಯಲ್ಲಿ’ “ಕಳ್ಳರು” ಮನೆಯಲ್ಲಿ

N Shameed
1 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ ಹಾಗೂ ನಗದು ಹಣ ಕಳ್ಳತನ ವಾದ ಘಟನೆ ಗುರುವಾರದಂದು ಜರುಗಿದ್ದು, ತಿಂಗಳೊಂದರಲ್ಲಿ ಇದು ಎರಡನೇ ಘಟನೆ ನಡೆದಿರುವುದು ಪಟ್ಟಣದ ಜನರ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ ಅಕ್ಕಿ ಯವರ ಓಣಿಯಲ್ಲಿಯ ಅಮರೇಗೌಡ ಪಾಟೀಲ್ ಎಂಬುವವರ ಮನೆಯಲ್ಲಿ ಕಳ್ಳತನ ಜರುಗಿದ್ದು.
ಬುಧುವಾರದಂದು ಮನೆಯವರೆಲ್ಲ ಮನೆಗೆ ಬೀಗ ಹಾಕಿ ಉಮಲೂಟಿ ಜಾತ್ರೆಗೆ ತೆರಳಿದ್ದರು ಇಂದು ಬಂದು ಬಾಗಿಲು ತೆಗೆದಾಗ ಮನೆಯ ಅಲಮಾರದಲ್ಲಿದ್ದ ನಾಲ್ಕು ತೊಲೆ ಬಂಗಾರದ ತಾಳಿ ಸರ ಹಾಗೂ ನಗದು 20 ಸಾವಿರ ರೂಪಾಯಿ ಕಳ್ಳತನ ವಾಗಿದೆ ಎಂದು ತಿಳಿದು ಬಂದಿದೆ. ಒಟ್ಟು 1 ಲಕ್ಷ 40 ಸಾವಿರ ಬೆಲೆಬಾಳುತ್ತವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.

ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.

ತಿಂಗಳಲ್ಲಿಯೇ ಈ ರೀತಿಯ ಎರಡು ಕಳ್ಳತನ ಘಟನೆ ಜರುಗಿರುವುದು ಸಾರ್ವಜನಿಕರಲ್ಲಿ ಭಯ ಭೀತಿಗೆ ಕಾರಣವಾಗಿದ್ದು ಇಲಾಖೆಯು ಸೂಕ್ತ ಕ್ರಮ ಕೈಗೊಂಡು ಕಳ್ಳರನ್ನು ಪತ್ತೆ ಹಚ್ಚಲು ಒತ್ತಾಯಿಸಿದ್ದಾರೆ.

Share this Article
error: Content is protected !!