ಗೋವಾದ ಮದ್ಯ “ಬಾಟಲ್ ” ಪುರದಲ್ಲಿ ಅಕ್ರಮ ಮಾರಾಟ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ         

ಕುಷ್ಟಗಿ: ತಾಲೂಕಿನ ಪುರ ಗ್ರಾಮದಲ್ಲಿ ಹೊರ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಗಾದಾರಿ ಹಾಗೂ ರಾಮಣ್ಣ ಮುಳ್ಳೂರ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಪರಾಧಿ ಯನ್ನು ಬಂಧಿಸಿದ್ದಾರೆ.

ಆರೋಪಿತರಿಂದ ಗೋವಾ ರಾಜ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು 15300 ಲೀಟರ್ ಮದ್ಯ (ಪ್ಲಾಸ್ಟಿಕ್ ಬಾಟಲ್) ವಶಪಡಿಸಿಕೊಂಡಿದ್ದಾರೆ. ಆರೋಪಿತರು ಗೋವಾ ರಾಜ್ಯದಿಂದ ತಂದು ಪುರ ಗ್ರಾಮದ ತಮ್ಮ ಮನೆಯಲ್ಲಿ ಮಾರಾಟ ಮಾಡುತ್ತಿದ್ದರು ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಪರಾಧಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಕುಷ್ಟಗಿ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Share this Article
error: Content is protected !!