ಕುಷ್ಟಗಿ ತಾಲೂಕ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶೇಖರಗೌಡ ಸರನಾಡಗೌಡರ ಆಯ್ಕೆ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಕುಷ್ಟಗಿ ತಾಲೂಕ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರಾಗಿ ತಾವರಗೇರಾ ಪಟ್ಟಣದ ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡರ ಆಯ್ಕೆಯಾಗಿದ್ದಾರೆಂದು ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ತಿಳಿಸಿದರು.
ಗುರುವಾರದಂದು ಕುಷ್ಟಗಿ ನಗರದ ಬುತ್ತಿಬಸವೇಶ್ವರ ಶಾಲೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತ ದಿಂದ ನಿರ್ಧರಿಸಲಾಯಿತು.
ಫೆಬ್ರವರಿ 27 ರಂದು ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದಲ್ಲಿ ನಡೆಯುವ ತಾಲೂಕ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವರ ಅಭಿಪ್ರಾಯ ಪಡೆದು ತಾವರಗೇರಿಯ ಹಿರಿಯ ಸಾಹಿತಿಯವರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಸಂಕಿರಣ ಗೋಷ್ಠಿ ಮತ್ತು ಕವಿಗೋಷ್ಠಿ ನಡೆಸಲು 12 ಜನ ಸಾಧಕರಿಗೆ ಸನ್ಮಾನ ಮಾಡಲು ತೀರ್ಮಾನ ಮಾಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷತೆಯನ್ನು ಉಮೇಶ್ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ, ನಟರಾಜ್ ಸೋನಾರ್, ಶರಣಪ್ಪ ನೀಡಶೇಸಿ, ವಿಶ್ವನಾಥ್ ಅಂಬಲಿಕೊಪ್ಪಮಠ, ರಾಜಾಸಾಬ್ ನದಾಫ್, ಶ್ರೀನಿವಾಸ್ ಕಂಟ್ಲಿ, ಪರಶಿವಮೂರ್ತಿ ಮಾಟಲದಿನ್ನಿ, ಮಹೇಶ್ ನಾಯಕವಾಡಿ, ಬುದ್ನೇಸಾಬ್ ಕಲಾದಗಿ, ಮಲ್ಲಪ್ಪ ಕುದರಿ, ವೆಂಕಟೇಶ್ ಗಂಜಿಹಾಳ ಶರಣಪ್ಪ ಆಡುರ್, ಅಮರೇಶ ಗಲಗಲಿ, ಹನುಮೇಶ ಗುಮಗೇರಿ, ವಿರೇಶ ಬಂಗಾರ ಶೆಟ್ಟರ್, ಮಹೇಶ್ ಜಿ ಇತರರು ಇದ್ದರು.

Share this Article
error: Content is protected !!