ಮೆಣೇಧಾಳ ಗ್ರಾಮ ಪಂಚಾಯತ ಇತಿಹಾಸದಲ್ಲೆ ಪ್ರಥಮ ಬಾರಿಗೆ ಬಿಜೆಪಿ ಮಡಿಲಿಗೆ- ದೊಡ್ಡನಗೌಡ ಪಾಟೀಲ್

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಪಾಲಾಗಿರುವುದು ಕಾರ್ಯಕರ್ತರ ಶ್ರಮ ಮತ್ತು ಸರ್ಕಾರದ ಸಾಧನೆಯ ಹಿತದೃಷ್ಟಿಯಿಂದ ಸಂದ ಜಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು.
ಅವರು ಶುಕ್ರವಾರದಂದು ಮೆಣೇಧಾಳ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಗ್ರಾಪಂ ಅಭಿವೃದ್ಧಿಗಾಗಿ ಅನುದಾನ ತರುವದಾಗಿ ಹೇಳಿದರು.

ಈ ಸಂಧರ್ಬದಲ್ಲಿ ಮುಖಂಡರಾದ ಮಲ್ಲಣ್ಣ ಪಲ್ಲೆದ, ತಾವರಗೇರಾ ಪಟ್ಟಣ ಪಂಚಾಯತ ಸದ್ಯಸ್ಯರಾದ ಚಂದ್ರಶೇಖರ ನಾಲತ್ವಾಡ, ಉಮೇಶ ನಾಯಕ ಹುಲಿಹೈದರ್, ಕ್ಕುಷ್ಠಗಿ ಮಂಡಲ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಜೂಲಕುಂಟಿ, ಮೇಣೆದಾಳ ಪಂಚಾಯತ ನೂತನ ಅಧ್ಯಕ್ಷರಾದ ಅಲಮ್ ಬಾಷಾ ಅಂಕುಶದೊಡ್ಡಿ, ಉಪಾಧ್ಯಕ್ಷ ರಾದ ಸೋಮಣ್ಣ ಬುಡಕುಂಟಿ, ಆನಂದರಾವ ದೇಸಾಯಿ, ಶಾಂತಪ್ಪ ದಿವಟರ್, ದೇವೇಂದ್ರಪ್ಪ ಮುಕರ್ತನಾಳ, ಶರಣಪ್ಪ ಮುಕರ್ತನಾಳ, ಮಲ್ಲಪ್ಪ ಹೂಗಾರ, ಬಬ್ರುವಾಹನ, ಕನಕಪ್ಪ, ಪಂಪಣ್ಣ ಕ್ಯಾವಟರ ಸೇರಿದಂತೆ ಗ್ರಾಪಂ ಸದ್ಯಸ್ಯರು ಹಾಗೂ ಇತರ ಮುಖಂಡರು ಇದ್ದರು.

Share this Article
error: Content is protected !!