ಯಲಬುರ್ಗ: ಹಿರೇಅರಳಹಳ್ಳಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಾಕ್ಷರ ಆಯ್ಕೆ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ಯಲಬುರ್ಗಾ : ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂ ಗೆ ನೂತನ ಅಧ್ಯಕ್ಷರಾಗಿ ದೇವೇಂದ್ರಗೌಡ ಮಾಲಿಪಾಟೀಲ, ಉಪಾಧ್ಯಕ್ಷರಾಗಿ ಸುನಿತಾ ಮುದೇಗೌಡ್ರ ಅವಿರೋಧವಾಗಿ ಆಯ್ಕೆಯಾದರು.

ಹಿರೇಅರಳಿಹಳ್ಳಿ ಗ್ರಾಪಂ ನ ಒಟ್ಟು 21 ಜನ ಸದಸ್ಯರಲ್ಲಿ 13 ಜನ ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಅಧ್ಯಕ್ಷರಾಗಿ ದೇವೇಂದ್ರಗೌಡ ಮಾಲಿಪಾಟೀಲ್, ಉಪಾಧ್ಯಕ್ಷರಾಗಿ ಸುನೀತಾ ಮುದೇಗೌಡ್ರ ಅವಿರೋಧವಾಗಿ ಆಯ್ಕೆಯಾದರು.

ಸಾಮಾನ್ಯ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ದೇವೇಂದ್ರಗೌಡ ಮಾಲಿಪಾಟೀಲ್, ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಸುನೀತಾ ಮುದೇಗೌಡ್ರ ನಾಮ ಪತ್ರ ಸಲ್ಲಿಸಿದರು. ಆದರೆ ಇವರಿಬ್ಬರ ವಿರೋಧ ಯಾರೂ ಸಹ ನಾಮಪತ್ರ ಸಲ್ಲಿಸದೆ ಇರುವದರಿಂದ ಇವರಿಬ್ಬರ ಪರ 13 ಜನ ಸದಸ್ಯರು ತಮ್ಮ ಬಹುಮತ ವ್ಯಕ್ತಪಡಿಸಿರುವದರಿಂದ ಇವರಿಬ್ಬರು ಅವಿರೋಧ ವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಪ್ಪ ವಾದಿ, ಮೌನೇಶ ನಂದಿಹಾಳ, ಹನುಮಂತ ದೊಡ್ಡಮನಿ, ಮಲ್ಲೆಪ್ಪ ನಿಟ್ಟಾಲಿ, ಮಾನಪ್ಪ, ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.

Share this Article
error: Content is protected !!