ತಾವರಗೇರಾ : ಜುಮಲಾಪೂರ ಗ್ರಾಮ ಪಂಚಾಯತ್ ಕಾಂಗ್ರೇಸ್ ವಶಕ್ಕೆ

N Shameed
1 Min Read

 

ವರದಿ:  ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಪಂ ಗೆ ನೂತನ ಅಧ್ಯಕ್ಷರಾಗಿ ಅಕ್ಕಮ್ಮ ಈರಣ್ಣ ದಂಡಿನ್, ಉಪಾಧ್ಯಕ್ಷರಾಗಿ ಛತ್ರಪ್ಪ ರಾಠೋಡ್ ಅವಿರೋಧವಾಗಿ ಆಯ್ಕೆಯಾದರು.
ಜುಮಲಾಪೂರ ಗ್ರಾಪಂ ನಲ್ಲಿ ಒಟ್ಟು 25 ಜನ ಸದಸ್ಯರಿದ್ದು, ಅಧ್ಯಕ್ಷ ಬಿಸಿಎಂ-ಅ ಮಿಸಲಾತಿ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಕ್ಕಮ್ಮ ಈರಣ್ಣ ದಂಡಿನ್, ಉಪಾಧ್ಯಕ್ಷ ಎಸ್ ಸಿ (ಪರಿಶಿಷ್ಟ ಜಾತಿ) ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಛತ್ರಪ್ಪ ರಾಠೋಡ್ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ಸಹ ನಾಮಪತ್ರ ಸಲ್ಲಿಸದೆ ಇರುವದರಿಂದ ಅಧ್ಯಕ್ಷರಾಗಿ ಅಕ್ಕಮ್ಮ ಈರಣ್ಣ ದಂಡಿನ್, ಉಪಾಧ್ಯಕ್ಷರಾಗಿ ಛತ್ರಪ್ಪ ರಾಠೋಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದುರ್ಗಾಪ್ರಸಾದ ವಂಕ ಘೋಷಿಸಿದರು.
ನಂತರ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಅಂಚಿ, ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ನಾಗೇಶ, ಕಾಂಗ್ರೇಸ್ ಮುಖಂಡರಾದ ಬಸನಗೌಡ ಮಾಲಿಪಾಟೀಲ್, ಶಶಿಧರಗೌಡ ಪಾಟೀಲ್, ವೀರಭದ್ರಗೌಡ ರಾಂಪೂರ, ಆದಪ್ಪ ಉಳ್ಳಾಗಡ್ಡಿ, ಬಸನಗೌಡ ಮಾಲಿಪಾಟೀಲ್, ತಿಪ್ಪಣ್ಣ, ದೊಡ್ಡಪ್ಪ ಉರಾಳ, ಶರಣಪ್ಪ ತುರ್ವಿಹಾಳ, ಚಂದ್ರಶೇಖರ ಗಿರಣಿ, ಕನಕಪ್ಪ ಹ್ಮಡೇಜಾಲಿ, ಶಿವಪುತ್ರಪ್ಪ ಬಪ್ಪೂರ ಸೇರಿದಂತೆ ಇನ್ನಿತರರಿದ್ದರು.

Share this Article
error: Content is protected !!