ತಾವರಗೇರಾ: ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಬಿಜೆಪಿ ವಶಕ್ಕೆ

N Shameed
1 Min Read

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಸಮೀಪದ ಕಿಲ್ಲಾರಹಟ್ಟಿ ಗ್ರಾಪಂ ಗೆ ನೂತನ ಅಧ್ಯಕ್ಷರಾಗಿ ಶರಣಮ್ಮ ಚವ್ಹಾಣ್, ಉಪಾಧ್ಯಕ್ಷರಾಗಿ ರಾಘವೇಂದ್ರ ತೆಮ್ಮಿನಾಳ ಅವಿರೋಧವಾಗಿ ಆಯ್ಕೆಯಾದರು.
ಕಿಲ್ಲಾರಹಟ್ಟಿ ಗ್ರಾಪಂ ನಲ್ಲಿ ಒಟ್ಟು ೨೬ ಜನ ಸದಸ್ಯರಿದ್ದು, ಅಧ್ಯಕ್ಷ ಎಸ್ ಸಿ ಮಹಿಳೆ ಮಿಸಲಾತಿ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶರಣಮ್ಮ ಚವ್ಹಾಣ್, ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಘವೇಂದ್ರ ತೆಮ್ಮಿನಾಳ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ಸಹ ನಾಮಪತ್ರ ಸಲ್ಲಿಸದೆ ಇರುವದರಿಂದ ಮತ್ತು ಇವರಿಬ್ಬರಿಗೂ ೨೦ ಜನ ಸದಸ್ಯರು ಬೆಂಬಲ ಸೂಚಿಸಿರುವದರಿಂದ ಅಧ್ಯಕ್ಷರಾಗಿ ಶರಣಮ್ಮ ಚವ್ಹಾಣ್, ಉಪಾಧ್ಯಕ್ಷರಾಗಿ ರಾಘವೇಂದ್ರ ತೆಮ್ಮಿನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದುರ್ಗಪ್ರಸಾದ ವಂಕ ಘೋಷಿಸಿದರು.
ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ ಸಿಹಿ ಅಂಚಿ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

 

ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಗುರಪ್ಪ ನಾಯಕ, ಕರವಸೂಲಿಗಾರ ಛತ್ರಪ್ಪ ಕಾಟಿಗಲ್, ಬಿಜೆಪಿ ಮುಖಂಡರಾದ ಶಂಭನಗೌಡ ಪೊಲೀಸ್ ಪಾಟೀಲ್, ಚಂದ್ರಶೇಖರ ನಾಲತವಾಡ, ಮಂಜುನಾಥ ಜೂಲಕುಂಟಿ, ರಮೇಶ ಗಿರಣಿ, ಗ್ಯಾನಪ್ಪ ಹೊಸಮನಿ, ಛತ್ರಪ್ಪ ತೆಮ್ಮಿನಾಳ, ದೇವೇಂದ್ರಪ್ಪ, ನಾಗರಾಜ, ಗ್ಯಾನಪ್ಪ, ಶಿವಪ್ಪ, ಪರಮಣ್ಣ, ಬಾಳಪ್ಪ, ಯಂಕಣ್ಣ, ಬಸವರಾಜ, ಪ್ರಧಾನಿ ಚವ್ಹಾಣ್, ರಾಮಣ್ಣ, ಕನಕಪ್ಪ ಇದ್ದರು.
————————————

Share this Article
error: Content is protected !!